ಕೇಂದ್ರ ಕಾರಾಗೃಹದಲ್ಲಿ ನಲಪಾಡ್ ‘ಸೈಲೆಂಟ್​ ಜೀವನ’..!

ಬೆಂಗಳೂರು: ಉದ್ಯಮಿಯ ಪುತ್ರ ವಿದ್ವತ್ ಮೇಲೆ ತನ್ನ ಸಹಚರರ ಜೊತೆಗೂಡಿ ತೀವ್ರ ಹಲ್ಲೆ ಮಾಡಿ, ಜೈಲುಪಾಲಾಗಿರುವ ಮೊಹಮದ್​ ನಲಪಾಡ್ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ‘ಸೈಲೆಂಟ್​ ಜೀವನ’ ನಡೆಸುತ್ತಿದ್ದಾನೆ! ಏನಿದು, ರೌಡಿಯಂತೆ ಅಮಾಯಕನ ಮೇಲೆ ಹಲ್ಲೆ ಮಾಡಿ ಇದೀಗ ಸೈಲೆಂಟ್​ ಆಗಿದ್ದಾನಾ ನಲಪಾಡ್?​ ಅಂದ್ಕೋಬೇಡಿ. ಏಕೆಂದರೆ ನಲಪಾಡ್​ ‘ಸೈಲೆಂಟ್​ ಜೀವನ’ ನಡೆಸುತ್ತಿದ್ದಾನೆ ಅಂತ ಹೇಳಿದ್ದು ಆತ ಬೆಳಿಗ್ಗೆಯಿಂದ ಸಂಜೆಯವರೆಗೆ ಸೈಲೆಂಟ್ ಸುನೀಲ್​ನ ಜೊತೆಗೆ ಕಾಲ ಕಳೆಯುತ್ತಿದ್ದಾನಂತೆ.

ಕೇರಂ ಆಡ್ತಾ ಸಮಯ ಕಳೆಯುವ ನಲಪಾಡ್, ಈ ಹಿಂದೆ ನಕಲಿ ಛಾಪಾ ಕಾಗದ ರೂವಾರಿ ತೆಲಗಿ ವಾಸವಿದ್ದ ಕೊಠಡಿಯಲ್ಲಿ ತಂಗಿದ್ದಾನಾದರೂ ಸಂಜೆಯ ಬಳಿಕ, ಜೈಲು ಆಸ್ಪತ್ರೆಯ ಕೊಠಡಿಯಲ್ಲಿ ವಾಸವಾಗುತ್ತಾನೆ ಎಂದು ಕಾರಾಗೃಹ ಮೂಲಗಳು ಹೇಳಿವೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗಾಗಿ ಸಂಪರ್ಕಿಸಿ: contact@firstnews.tv