ಇ-ಸಿಗರೇಟ್​ ಸೇದೋಕು ಮುನ್ನ ಈ ಸ್ಟೋರಿ ನೋಡಿ..

ಸಿಗರೇಟ್​ ಸೇದೋದ್ರಿಂದ ಒಳಗಿನಿಂದ ಆರೋಗ್ಯ ಹದಗೆಟ್ಟು ಸಾವನ್ನಪೋದು ಸಹಜ.. ಆದ್ರೆ, ಟೆಕ್ಸಾಸ್​ನಲ್ಲಿ ಯುವಕನೊಬ್ಬ ಇ-ಸಿಗರೇಟ್​​ಗೆ ಬಲಿಯಾಗಿದ್ದಾನೆ. ವಿಲಿಯಂ ಬ್ರೌನ್ ಎಂಬಾತ ಎಲೆಕ್ಟ್ರಿಕ್ ಸಿಗರೇಟ್​ ಸೇದುತ್ತಿದ್ದಾಗ, ಬ್ಲಾಸ್ಟ್ ಆಗಿದೆ. ಟೆಕ್ಸಾಸ್​ನ ಫೋರ್ಟ್​ ವರ್ಥ್​ನ ವೇಪ್​ ಶಾಪ್​ನ ಪಾರ್ಕಿಂಗ್​ನಲ್ಲಿ ಜನವರಿ 27ರಂದು ಈ ಘಟನೆ ನಡೆದಿದೆ. ಇ-ಸಿಗರೇಟ್​​ ಸ್ಫೋಟದಿಂದ ವಿಲಿಯಂ ಮುಖ ಸಂಪೂರ್ಣವಾಗಿ ಸುಟ್ಟುಹೋಗಿದೆ. ಸಿಗರೇಟ್​ ಬ್ಲಾಸ್ಟ್​​ ಆಗ್ತಿದ್ದಂತೆ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ತಲೆಬುರುಡೆಗೆ ತೀವ್ರ ಪೆಟ್ಟಾಗಿದ್ರಿಂದ ಚಿಕಿತ್ಸೆ ಫಲಿಸದೇ 29ರಂದು ಆತ ಸಾವನ್ನಪ್ಪಿದ್ದಾನೆ.

Follow us on:

YouTube: firstNewsKannada  Instagram: firstnews_tv  Face Book: firstnews.tv  Twitter: firstnews_tv